ಅರಾಮೇಯಿಕ್ ಲಿಪಿ : ಪ್ರಾಚೀನ ಸಿರಿಯದ ಜನ ಬಳಸುತ್ತಿದ್ದ ಈ ಲಿಪಿ
ಉತರ ಸಿಮೆಟಿಕ್ ವರ್ಗಕ್ಕೆ ಸೇರಿದೆ. ಈ ಲಿಪಿಯ ಅತ್ಯಂತ
ಪ್ರಾಚೀನ ಶಾಸನ ಟಿಲ್-ಹಲಾಫ್‍ನಲ್ಲಿ ದೊರಕಿದ್ದು, ಪ್ರ ಶ.ಪೂ.
9ನೆಯ ಶತಮಾನಕ್ಕೆ ಸೇರಿದುದಾಗಿದೆ. ಇದು ಪಶ್ಚಿಮ ಏಷ್ಯದಲ್ಲಿ
ಅದರಲ್ಲೂಪರ್ಷಿಯ ರಾಜ್ಯದಲ್ಲಿ ವಿಶೇಷವಾಗಿ ಬಳಕೆಯಲ್ಲಿತ್ತು. 
ಈ ಲಿಪಿ ಹೀಬ್ರೂ, ಸಿರಿಯಕ್, ಮಂಡೇನ್, ಮನಿಷೇನ್,
ಖರೋಷ್ಠೀ, ಪಹ್ಲವಿ, ಅವೆಸ್ತ ಮುಂತಾದ ಲಿಪಿಗಳ ವಿಕಾಸಕ್ಕೆ
ಕಾರಣವಾಯಿತು. ಭಾರತದಲ್ಲಿ ಪ್ರಚಾರದಲ್ಲಿದ್ದ ಖರೋಷ್ಠೀ
ಮತ್ತು ಬ್ರಾಹ್ಮೀ ಲಿಪಿಗಳ ಉತ್ಪತ್ತಿಗೂ ಅರಾಮೇಯಿಕ್
ಲಿಪಿಯೇ ಕಾರಣವೆಂದು ಕೆಲ ವಿದ್ವಾಂಸರು ವಾದಿಸುತ್ತಾರೆ.
ಆಫ್ಘಾನಿಸ್ತಾನದಲ್ಲಿ ಈ ಲಿಪಿಯಲ್ಲಿ ಬರೆದ ಅಶೋಕನ
ಶಾಸನಗಳು ಸಿಕ್ಕಿವೆ.
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ